ಆಧಾರ್ ಕಾರ್ಡ್ ನಂಬರ್ ನಿಂದ ಆಧಾರ್ ಕಾರ್ಡ್ ಡೌನ್‌ಲೋಡ್ ಮಾಡಿಕೊಳ್ಳಿ .
ಭಾರತ ಸರ್ಕಾರವು ಒದಗಿಸುವ ಕೆಲವು ಸರ್ಕಾರಿ ಕಲ್ಯಾಣ ಸೌಲಭ್ಯಗಳನ್ನು ಪಡೆಯಲು ಭಾರತದ ಪ್ರಜೆಗೆ ಆಧಾರ್ ಕಡ್ಡಾಯವಾಗಿದೆ . ಆಧಾರ್ ಒಬ್ಬ ವ್ಯಕ್ತಿಯ ವಿಳಾಸ ಮತ್ತು ಗುರುತಿನ ಪುರಾವೆಯಾಗಿ ಬಿಂಬಿಸುತ್ತದೆ. ಆಧಾರ್ ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI ) ಹೊರಡಿಸಿದ 12-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆ. ಒಬ್ಬ ವ್ಯಕ್ತಿಯು ಆಧಾರ್ ಕೇಂದ್ರಗಳಿಗೆ, ಬ್ಯಾಂಕುಗಳು, ಅಂಚೆ ಕಚೇರಿಗಳಿಗೆ ಭೇಟಿ ನೀಡುವ ಮೂಲಕ ಆಧಾರ್ ಕಾರ್ಡ್‌ಗೆ ಅರ್ಜಿ ಅನ್ನು ಸಲ್ಲಿಸಬಹುದು . ತದ ನಂತರ, ಯುಐಡಿಎಐ ನೀಡಿದ ದಾಖಲಾತಿ ಐಡಿ, ವರ್ಚುವಲ್ ಐಡಿ ಅಥವಾ ಆಧಾರ್ ಸಂಖ್ಯೆಯನ್ನು ಬಳಸಿಕೊಂಡು ಯುಐಡಿಎಐ ಆಧಾರ್ ಅನ್ನು ಡೌನ್‌ಲೋಡ್ ಮಾಡಿ ಮುದ್ರಿಸಬಹುದು. Aadhar ಡೌನ್ಲೋಡ್ ಮಾಡುವ ಸಲುವಾಗಿ ಈ ವಿಭಿನ್ನ ಹಂತಗಳನ್ನು ಅನುಸರಿ.
ನೀವು ಇ-ಆಧಾರ್ ಕಾರ್ಡ್ ಅನ್ನು ಆನ್‌ಲೈನ್‌ನಲ್ಲಿ ಡೌನ್‌ಲೋಡ್ ಮಾಡಲು ಮತ್ತು ಮುದ್ರಿಸಲು ಬಯಸಿದರೆ, ನೀವು ಈ ಕೆಳಗಿನ ಹಂತಗಳನ್ನು ಅನುಸರಿಸಬೇಕು:
ಹಂತ ೧: ಮೊದಲನೇದಾಗಿ https://uidai.gov.in/ ವೆಬ್ಸೈಟ್ ಗೆ ಲಾಗಿನ್ ಆಗಿ / ಭೇಟಿ ನೀಡಿ.
ಹಂತ ೨: 'My Aadhar' ಆಯ್ಕೆಯಿಂದ ‘Download Aadhar’ ಆಯ್ಕೆಯನ್ನು ಕ್ಲಿಕ್ ಮಾಡಿ ಅಥವಾ https://eaadhaar.uidai.gov.in/ ಲಿಂಕ್‌ಗೆ ಭೇಟಿ ನೀಡಿ. ಹೆಚ್ಚಿನ ವಿವರಕ್ಕಾಗಿ ಕೆಳಗಿನ screenshot ನೋಡಬಹುದು.
ಹಂತ ೩: “I have ” ವಿಭಾಗದ ಅಡಿಯಲ್ಲಿ “Aadhar” ಆಯ್ಕೆಯನ್ನು ಆರಿಸಿ. ಹೆಚ್ಚಿನ ವಿವರಕ್ಕಾಗಿ ಕೆಳಗಿನ screenshot ನೋಡಬಹುದು.
ಹಂತ ೪: ನಂತರ , 12-ಅಂಕಿಯ ಆಧಾರ್ ಸಂಖ್ಯೆಯನ್ನು ನಮೂದಿಸಿ. ನೀವು ಮಾಸ್ಕ್ ಆಧಾರ್ ಸಹ ಕೂಡ ಡೌನ್ಲೋಡ್ ಮಾಡಬಹುದು. ಡೌನ್‌ಲೋಡ್ ಮಾಡಲು ಬಯಸಿದರೆ "I want mask Aadhar" ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ ೫: ನಂತರ ನೀಡಲಾದ captcha ನಮೂದಿಸಿ. "send OTP " ಅನ್ನು ಒತ್ತಿ. ಹೆಚ್ಚಿನ ವಿವರಕ್ಕಾಗಿ ಕೆಳಗಿನ screenshot ನೋಡಬಹುದು.
ಹಂತ ೬: ನಿಮ್ಮ ನೊಂದಾಯಿಸಲಾದ ಮೊಬೈಲ್ ಸಂಖ್ಯೆಗೆ ಖಾಳುಹಿಸಲಾದ OTP ನಮೂದಿಸಿ.
ಹಂತ ೭: ನಂತರ ಕೆಳಗೆ ನೀಡಲಾಗಿರುವ survey ಯನ್ನು ಮುಗಿಸಿ. ಹೆಚ್ಚಿನ ವಿವರಕ್ಕಾಗಿ ಕೆಳಗಿನ screenshot ನೋಡಬಹುದು.
ಈಗ ನಿಮ E Aadhar PDF format ಡೌನ್ಲೋಡ್ ಆಯಾಗಿರುತ್ತದೆ.
ಹಂತ ೮: ಫೈಲ್ ಓಪನ್ ಮಾಡುಲು ನಿಮಗೆ password ಅನ್ನು ಕೇಳಲಾಗುವುದು. ಪಾಸ್ವರ್ಡ್ಗಾಗಿ ನಿಮ್ಮ ಹೆಸರಿನ ಮೊದಲನೇ 4 ಅಕ್ಷರ ಮತ್ತು ನಿಮ್ಮ ಹುಟ್ಟಿದ ವರ್ಷ್ ಎಂಟರ್ ಮಾಡಿ.
ಉದಾಹರಣೆ : ನಿಮ್ಮ ಹೆಸರು SRIDHAR ಮತ್ತು ಹುಟ್ಟಿದ ವರ್ಷ 1997 ಇದ್ದಾಗ ನಿಮ್ಮ PASSWORD - SRID1997 ಆಗಿರುತ್ತದೆ.
ಧನ್ಯವಾದಗಳು.
0 Comments